ರಾಮ ಹರೇ ಸಾಯಿ ಕೃಷ್ಣ ಹರೇ
ಆಡಿಯೋ
ಸಾಹಿತ್ಯ
- ರಾಮ ಹರೇ ಸಾಯಿ ಕೃಷ್ಣ ಹರೇ
- ಸರ್ವಧರ್ಮ ಪ್ರಿಯ ಸಾಯಿ ಹರೇ
- ಅಲ್ಲಾ ಈಶ್ವರ ಸಾಯಿ ಹರೇ
- ಗುರು ನಾನಕ್ ಯೇಸು ಬುದ್ಧ ಹರೇ
- ಜೋ ರಾಷ್ಟ್ರ ಮಹಾವೀರ ಸಾಯಿ ಹರೇ
- ಸರ್ವಧರ್ಮ ಪ್ರಿಯ ಸಾಯಿ ಹರೇ (ಬಾಬಾ)
ಅರ್ಥ
ಇದು ಒಂದು ಸರ್ವಧರ್ಮ ಭಜನೆ. ದೇವನೊಬ್ಬನೇ ಆದರೂ ಅವನ ವಿವಿಧ ನಾಮಗಳಾದ ರಾಮ, ಕೃಷ್ಣ, ಅಲ್ಲಾ, ಈಶ್ವರ, ಗುರುನಾನಕ್, ಯೇಸು, ಮಹಾವೀರ ಎಲ್ಲರಿಗೂ ನಮಸ್ಕಾರಗಳು. ನಮ್ಮ ಸ್ವಾಮಿಯವರು ಸರ್ವಧರ್ಮಗಳ ಸಮನ್ವಯ ದ ಬಗ್ಗೆ ಒತ್ತಿ ಹೇಳಿದ್ದಾರೆ. ಎಲ್ಲ ಧರ್ಮಗಳು ಅವರಿಗೆ ಅಷ್ಟೇ ಪ್ರಿಯವಾದವುಗಳು. ಸ್ವಾಮಿ ಎಲ್ಲಾ ಧರ್ಮಗಳನ್ನು ಪ್ರತಿನಿಧಿಸುತ್ತಾರೆ.
ವಿವರಣೆ
ರಾಮ | ಶ್ರೀರಾಮ. ಆನಂದವನ್ನು ಕೊಡುವವನು |
---|---|
ಸಾಯಿ | ಇದು ನಮ್ಮ ಪ್ರೀತಿಯ ಸ್ವಾಮಿಯ ಹೆಸರು. ನಮ್ಮ ದಾರಿದೀಪ (Master) |
ಕೃಷ್ಣ | ಶ್ರೀಕೃಷ್ಣ. ಕೃಷ್ಣ ಎಂಬುದು ‘ಕರ್ಷ್’ ಎಂಬ ಮೂಲ ಶಬ್ದದಿಂದ ಬಂದಿದೆ. ಕರ್ಷ್ ಅಂದರೆ ಆಕರ್ಷಿಸುವವನು. |
ಸರ್ವಧರ್ಮ | ಸರ್ವ – ಎಲ್ಲ; ಧರ್ಮ – ಧರ್ಮ |
ಪ್ರಿಯ | ಎಲ್ಲರನ್ನೂ ಪ್ರೀತಿಸುವವನು |
ಅಲ್ಲಾ | ಅಲ್ಲಾ ನಿರಾಕಾರ ಭಗವಂತನನ್ನು ಮುಸ್ಲಿಮರು ಕರೆಯುವ ರೀತಿ. ಸ್ವಾಮಿ ಹೇಳುತ್ತಾರೆ – ಅ ಅಂದರೆ ಆತ್ಮ (eternal soul), ಲ್ಲಾ – ಲಯವಾಗುವುದು/ಒಂದಾಗುವುದು. |
ಈಶ್ವರ್ | Means ‘master’. ಸಾಮಾನ್ಯವಾಗಿ ಶಿವನಿಗೆ ಈಶ್ವರನೆಂದು ಕರೆಯುತ್ತಾರೆ. |
ಗುರುನಾನಕ್ | ಗುರುನಾನಕ್. 10 ಗುರುಗಳಲ್ಲಿ ಮೊದಲನೆಯವರಾದ ಇವರು ಸಿಖ್ ಧರ್ಮವನ್ನು ಸ್ಥಾಪಿಸಿದರು. ನಾನಕ್ = ನ + ಆನಕ್ (ನ ದ್ವಿತೀಯ) nothing but one.. ದೇವರೊಬ್ಬನೆ |
ಏಸು | ಪ್ರಭು ಏಸು.. ಸ್ವಾಮಿ ಹೇಳುತ್ತಾರೆ.. ‘ಏ’ ಅಂದರೆ ‘ಒಂದು’ ಹಾಗೂ ‘ಸು’ ಅಂದರೆ ಒಳ್ಳೆಯದು. ಹಾಗಾಗಿ ‘ಏಸು’ ಅಂದರೆ ಒಂದು ಅತ್ಯುತ್ತಮವಾದದ್ದು. ಈ ಪ್ರಪಂಚದಲ್ಲಿ ಅತ್ಯುತ್ತಮವಾದದ್ದು ಒಂದೇ ಒಂದು. ಅದು ಸರ್ವಶಕ್ತನೂ, ಸರ್ವಾಂತರ್ಯಾಮಿಯೂ ಆದ ಭಗವಂತ. |
ಬುದ್ಧ | ಬುದ್ಧ.. ಎಲ್ಲವನ್ನು ಅರಿತವನು – ಜ್ಞಾನಿ ‘the enlightened one’ |
ಜೋ ರಾಷ್ಟ್ರ | ಜೊರಾಸ್ಟರ್ ಪರ್ಷಿಯನ್ ಪ್ರವಾದಿ. ಪುರಾತನ ಧರ್ಮಗಳಲ್ಲಿ ಒಂದಾದ “ಜೊರಾಷ್ಟರ್ ಧರ್ಮ” ಸಂಸ್ಥಾಪಕ.. His name means ‘He of the Golden Light’ |
ಮಹಾವೀರ್ | ಮಹಾವೀರ್ – ಇವರು ಜೈನ ಧರ್ಮದ ಸ್ಥಾಪಕರು. ಮಹಾವೀರ = ಮಹಾ + ವೀರ, ಮಹಾ = ಮಹಾ, ದೊಡ್ದ ವೀರ = ವೀರ, ಶೂರ |
ಬಾಬಾ | ತಂದೆ.. ಭಗವಾನ್ ಬಾಬಾರವರನ್ನು ಕರೆಯುವಾಗ ಈ ಶಬ್ದವನ್ನು ಉಪಯೋಗಿಸುತ್ತೇವೆ. |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty